New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಡಿಸೆಂಬರ್ 3: ಅಂತರರಾಷ್ಟ್ರೀಯ ಅಂಗವಿಕಲರ ದಿನ

ಅಂತರರಾಷ್ಟ್ರೀಯ ಅಂಗವಿಕಲರ ದಿನಾಚೃನೆಯನ್ನು ಪ್ರತಿ ವರ್ಷ ಡಿಸೆಂಬರ್ 3ರಂದು ಆಚರಿಸಲಾಗುತ್ತದೆ. ಇದು ಅಂಗವಿಕಲರ ಕಲ್ಯಾಣ ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಸಮಾಜದ ಅಭಿವೃದ್ಧಿಯ ಎಲ್ಲ ವಲಯಗಳಲ್ಲಿ ಅಂಗವಿಕಲರನ್ನು ಜೋಡಿಸಿಕೊಳ್ಳುವುದು ಇದರ ಉದ್ದೇಶ. ಇದು ಅಂಗವಿಕಲರ ಪರಿಸ್ಥಿತಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕøತಿಕ ಬದುಕಿನ ಎಲ್ಲ ಆಯಾಮಗಳನ್ನು ಇದು ಒಳಗೊಂಡಿರುತ್ತದೆ. ಇದು ಎಲ್ಲರಿಗಾಗಿ ಸುಸ್ಥಿರ ಸಮಾಜವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ವಿಶ್ವಸಂಸ್ಥೆಯ ಅಂದಾಜಿನಂತೆ ಸುಮಾರು ಒಂದು ನೂರು ಕೋಟಿ ಅಂಗವಿಕಲರು ವಿಶ್ವಾದ್ಯಂತ ಇದ್ದಾರೆ. ಇವನ್ನು ಎಲ್ಲರನ್ನೂ ಸಮಾಜದ ಎಲ್ಲ ಆಯಾಮಗಳಲ್ಲಿ ಜೋಡಿಸಿಕೊಳ್ಳುವುದು ಇದರ ಉದ್ದೇಶ.

ಹಿನ್ನೆಲೆ

ಅಂತರರಾಷ್ಟ್ರೀಯ ಅಂಗವಿಕಲರ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1992ರಲ್ಲಿ ಕೈಗೊಂಡ 47/3 ನಿರ್ಣಯದ ಬಳಿಕ ಆರಂಭಿಸಲಾಗಿದೆ. ಬಳಿಕ ಇದನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಮೂಲಭೂತವಾಗಿ ಇದನ್ನು ಅಂಗವಿಕಲರ ದಿನ ಎಂದು ಕರೆಯಲಾಗುತ್ತಿತ್ತು.

Comment