Universal School Of Administration Integrated Degree college Admission Open for more details contact: 9686664985

ತೆಲಂಗಾಣದಲ್ಲಿ ವಿಶ್ವದ ಮೊಟ್ಟಮೊದಲ ಅಂಗವಿಕಲರ ಐಟಿ ವಿವಿ

ತೆಲಂಗಾಣದಲ್ಲಿ ವಿಶ್ವದ ಮೊಟ್ಟಮೊದಲ ಅಂಗವಿಕಲರ ಐಟಿ ವಿವಿ

ತೆಲಂಗಾಣ ಸರ್ಕಾರ ವಿಶ್ವದ ಮೊಟ್ಟಮೊದಲ ಅಂಗವಿಕಲರಿಗಾಗಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾನಿಲಯವನ್ನು ಆರಂಭಿಸಲು ನಿರ್ಧರಿಸಿದೆ. ನೂತನ ವಿಶ್ವವಿದ್ಯಾನಿಲಯ ರಾಜಧಾನಿ ಹೈದರಾಬಾದ್ನಲ್ಲಿ ತಲೆ ಎತ್ತಲಿದೆ.

ವಿಶ್ವ ಅಂಗವಿಕಲರ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇದನ್ನು ಘೋಷಿಸಿದ್ದು, ಸಂಬಂಧ ವಿಂದ್ಯಾ - ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡಿದೆ. ವಿಂಧ್ಯಾ - ಇನ್ಫೋಟೆಕ್ ಐಟಿ ಕ್ಯಾಂಪಸ್ ಅಭಿವೃದ್ಧಿಪಡಿಸುವ ಹೊಣೆ ಹೊತ್ತಿದ್ದು, ಇದು ಅಂಗವಿಕಲರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಪ್ರಮುಖ ಅಂಶಗಳು

ಇದು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಭಿನ್ನ ಸಾಮಥ್ರ್ಯದವರಿಗೆ ಸ್ನೇಹಿಯಾಗಿರುವ ಕ್ಯಾಂಪಸ್ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದನ್ನು ರಾಜ್ಯ ಸರ್ಕಾರ ಹೈದರಾಬಾದ್ನಲ್ಲಿ ಅಭಿವೃದ್ಧಿಪಡಿಸಿದ ಐಟಿ ಪಾರ್ಕ್ 100 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದು ನಿರ್ಮಾಣವಾಗಲಿದೆ. ಕ್ಯಾಂಪಸ್ನಲ್ಲಿ ತರಬೇತಿ, ವಿತರಣಾ ಕೇಂದ್ರ ಹಾಗೂ ವಾಸದ ಸೌಲಭ್ಯಗಳಿದ್ದು, ದೇಶೀಯ ಹಾಗೂ ವಿದೇಶಿ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಲಿದೆ.

ಕ್ಯಾಂಪಸ್ನಲ್ಲಿ ಸುಮಾರು 2000 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇದು ಅಗತ್ಯ ಕೌಶಲ ಮತ್ತು ತರಬೇತಿಯನ್ನು ನೀಡಲಿದೆ. ತೆಲಂಗಾಣ ಸರ್ಕಾರ ಮತ್ತು ವಿಂಧ್ಯಾ - ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್, ಹಲವು ಕಾರ್ಪೊರೇಟ್ ಸಂಸ್ಥೆಗಳನ್ನು ಇದರ ಪಾಲುದಾರಿಕೆಗಾಗಿ ಎದುರು ನೋಡುತ್ತಿವೆ. ಇದು ವಿಶ್ವದಲ್ಲೇ ವಿನೂತನ ಹಾಗೂ ಎಲ್ಲರನ್ನೂ ಸೇರ್ಪಡೆ ಮಾಡಿಕೊಳ್ಳುವ ಕ್ಯಾಂಪಸ್ ಆಗಲಿದೆ.

ವಿಂಧ್ಯಾ - ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್, ಅಂಗವಿಕಲರಿಗಾಗಿ ಸೌಲಭ್ಯವನ್ನು ಒದಗಿಸುವಲ್ಲಿ ಖ್ಯಾತ ಸಂಸ್ಥೆಯಾಗಿದ್ದು, ದೃಷ್ಟಿ ಮಾಂದ್ಯರಿಗೆ ಹಾಗೂ ಕಿವುಡು ಸಮಸ್ಯೆ ಇರುವವರಿಗಾಗಿ ಕೂಡಾ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾ ಬಂದಿದೆ. ಇದು ಬಿಪಿಓ ಸೇವೆಗಳನ್ನು ಹಲವು ಟೆಲಿಕಾಂ ಹಾಗಾಊ -ಕಾಮರ್ಸ್ ಕಂಪನಿಗಳಿಗೆ 2006ರಿಂದೀಚೆಗೆ ನೀಡುತ್ತಾ ಬಂದಿದೆ.

Comment