IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ನವದೆಹಲಿಯಲ್ಲಿ 11ನೇ ವರ್ಷದ ಮೆಡ್‍ಟೆಕ್ ಶೃಂಗ

11ನೇ ವರ್ಷದ ವಾರ್ಷಿಕ ಮೆಡ್ ಟೆಕ್ ಶೃಂಗವನ್ನು ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶೃಂಗಸಭೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನಗಳ ಮತ್ತು ಪರಿಸರ ಖಾತೆ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಡಾ.ಹರ್ಷವರ್ಧನ್ ಅವರು ಉದ್ಘಾಟಿಸಿದರು.

ಶೃಂಗವನ್ನು ಬಯೊಡಿಸೈನ್ ಯೋಜನೆಯಡಿ ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿದೆ. ಇದರಲ್ಲಿ ಸರ್ಕಾರಿ ಸಂಘಸಂಸ್ಥೆಗಳು, ಶಿಕ್ಷಣ ತಜ್ಞರು, ವೈದ್ಯಕೀಯ ಸಾಧನಗಳ ಕೈಗಾರಿಕಾ ಮುಖಂಡರು, ಸ್ಟಾರ್ಟ್ ಅಪ್ ಉದ್ಯಮಿಗಳು, ಆಸ್ಪತ್ರೆಗಳು, ವಿನ್ಯಾಸ ಮತ್ತು ವಹಿವಾಟು, ಎಂಜಿನಿಯರಿಂಗ್ ಕಂಪನಿಗಳು ಭಾಗವಹಿಸಿದ್ದವು. ಆಸ್ಟ್ರೇಲಿಯಾ, ಫಿನ್ಲೆಂಡ್, ಕೆನಡಾ, ಭಾರತ, ಜರ್ಮನಿ, ಜಪಾನ್, ಸಿಂಗಾಪುರ, ಬ್ರಿಟನ್ ಮತ್ತು ಅಮೆರಿಕದ ತಜ್ಞರು ಭಾಗವಹಿಸಿದ್ದರು.

ಜೈವಿಕ ವಿನ್ಯಾಸ ಯೋಜನೆ

ಜೈವಿಕ ತಂತ್ರಜ್ಞಾನ ಇಲಾಖೆಯು ವಿಜ್ಞಾಣ ಹಾಗೂ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ. ಇದು ಕೈಗೆಟುಕುವ ದರದಲ್ಲಿ ವಿನೂತನವಾದ ಸಾಧನಗಳನ್ನು ಅಭಿವೃದ್ಧಿಪಡಿಸುವ ಗುರಿಯಿಂದ ಜೈವಿಕ ವಿನ್ಯಾಸ ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಉನ್ನತ ಸಾಧನಗಳು ದೊರೆಯುವಂತಾಗಬೇಕು ಎನ್ನುವುದು ಇದರ ಉದ್ದೇಶ. ಇದು ಭವಿಷ್ಯದ ವೈದ್ಯಕೀಯ ಸಾಧನಗಳ ಸಂಶೋಧಕರನ್ನು ಬೆಳೆಸುವ ಉದ್ದೇಶ ಹೊಂದಿದೆ.

ಇದನ್ನು ಡಿಬಿಟಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಜತೆಗೆ ಐಐಟಿ ದೆಹಲಿಯಲ್ಲಿ ಇದನ್ನು ಅಂತರರಾಷ್ಟ್ರೀಯ ಪಾಲುದಾರರ ಜತೆಗೆ ಜಾರಿಗೆ ತರಲಾಗಿದೆ. ಡಿಬಿಟಿಯು ಅಧಿಕೃತ ಜೈವಿಕ ತಂತ್ರಜ್ಞಾಣ ಒಕ್ಕೂಟವಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ಬೌದ್ಧಿಕ ಆಸ್ತಿ ಮತ್ತು ತಂತ್ರಜ್ಞಾನ- ಕಾನೂನು ಸಂಬಂಧಿ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

Comment