New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ನೊಕ್ಸೆನೊ: ಮೂಗಿನ ಬಾಹ್ಯ ವಸ್ತು ತೆಗೆಯಲು ಸಾಧನ

ಭಾರತ ಸರ್ಕಾರವು ನೊಕ್ಸೆನೊ ಹೆಸರಿನ ಮೂಗಿನಲ್ಲಿ ಸೇರಿರುವ ಬಾಹ್ಯ ವಸ್ತುವನ್ನು ಹೊರತೆಗೆಯುವ ಹೊಸ ಸಾಧನವನ್ನು ಬಿಡುಗಡೆ ಮಾಡಿದೆ. ಇದನ್ನು ಸ್ಟಾರ್ಟ್ ಅಪ್ ಉದ್ಯಮವಾದ ಇನ್ಎಕ್ಸೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಬೆಂಗಳೂರು ಮೂಲದ ಕಂಪನಿ ಬಯೋಡಿಸೈನ್ ಪ್ರೋಗ್ರಾಂ ಯೋಜನೆಯಡಿ ತರಬೇತಿ ಪಡೆದ ವಿದ್ಯಾರ್ಥಿ ಶೋಧಿಸಿದ ಸಾಧನವಾಗಿದೆ. ನೊಕ್ಸೆನೊ, ಮೂಗಿನಲ್ಲಿ ಸೇರಿರುವ ಬಾಹ್ಯ ವಸ್ತುವನ್ನು ಹೊರತೆಗೆಯಲು ಅಭಿವೃದ್ಧಿಪಡಿಸಿದ ಮೊಟ್ಟಮೊದಲ ಸಾಧನವಾಗಿದ್ದು, ಇದರ ಮೂಲಕ ವೈದ್ಯರು ಕ್ಷಿಪ್ತವಾಗಿ ಹಾಗೂ ಸುರಕ್ಷಿತವಾಗಿ ಮೂಗಿನ ಬಾಹ್ಯ ವಸ್ತುಗಳನ್ನು ಹೊರತೆಗೆಯುವಲ್ಲಿ ನೆರವಾಗುತ್ತದೆ. ಅದರಲ್ಲೂ ಮುಖ್ಯವಾಗಿ 2ರಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ವರದಾನವಾಗಲಿದೆ.

ಪ್ರಮುಖ ಅಂಶಗಳು

ನೆಕ್ಸೆನೊ ಸಾಧನವನ್ನು ಶೇಕಡ 100ರಷ್ಟು ಭಾರತದಲ್ಲೇ ಅನ್ವೇಷಿಸಿದ, ವಿನ್ಯಾಸಗೊಳಿಸಿದ ಮತ್ತು ಉತ್ಪಾದಿಸಲಾಗಿದೆ. ಇದು ಎರ್ಗೊನೊಮಿಕ್ ಹ್ಯಾಂಡಲ್ ಹೊಂದಿದ್ದು, ಅಂತರ್ಗತವಾದ ಬೆಳಕಿನ ಮೂಲವನ್ನು ಮತ್ತು ಚಿಮಟಿಯನ್ನು ಹೊಂದಿರುತ್ತದೆ. ಇದು ಬಳಕೆದಾರರು ಎನ್ಎಫ್ಬಿ ಹಿಂದಿನಿಂದ ಜಾರಿಸುವಂತೆ ಮಾಡುತ್ತದೆ ಹಾಗೂ ಸುಲಭವಾಗಿ ಕೆಲವೇ ಸೆಕೆಂಡ್ಗಳಲ್ಲಿ ಸೀನುವಿಕೆ ಮೂಲಕ ಇದನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ಸಾಧನವನ್ನು ಎಳೆಯುವ ಮೂಲಕ ಸೀನು ಬರುವಂತೆ ಮಾಡಿ ವಸ್ತುವನ್ನು ಹೊರತೆಗೆಯಲಾಗುತ್ತದೆ.

ಮಾದರಿಯಲ್ಲಿ ಮುಖ್ಯವಾಗಿ ಚಿಮಟಿಯನ್ನು ಕುದಿಸುವಿಕೆ ಮೂಲಕ ಸ್ವಯಂಚಾಲಿತವಾಗಿ ಸ್ವಚ್ಛವಾಗುವಂತೆ ಮಾಡಲಾಗುತ್ತದೆ. ಇದು ಮರುಬಳಕೆಯ ಸಾಧನಾಗಿದ್ದು, ಬಳಸಲು ಸುಲಭ ಹಾಗೂ ಮಿತ ವೆಚ್ಚದಾಯಕ. ಇನ್ಎಕ್ಸೆಲ್ ಟೆಕ್ನಾಲಜೀಸ್ ಸಾಧನವನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿಸಲು ಉದ್ದೇಶಿಸಿದೆ ಇದರ ಜತೆಗೆ ಸಮುದಾಯ ಆರೋಗ್ಯ ಕೇಂದ್ರ, ಕ್ಲಿನಿಕ್ ಹಾಗೂ ಸಣ್ಣ ಆಸ್ಪತ್ರೆಗಳಲ್ಲೂ ರಾಷ್ಟ್ರಾದ್ಯಂತ 2020ರೊಳಗೆ ಪರಿಚಯಿಸಲಿದೆ.

Comment