New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಡಿಸೆಂಬರ್ 4: ಭಾರತದ ನೌಕಾ ದಿನ

ಡಿಸೆಂಬರ್ 4: ಭಾರತದ ನೌಕಾ ದಿನ

ಭಾರತೀಯ ನೌಕಾಪಡೆಯ ದಿನಾಚರಣೆಯನ್ನು ಡಿಸೆಂಬರ್ 4ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ನೌಕಾಪಡೆಯ ಸಾಧನೆಗಳನ್ನು ಸಂಭ್ರಮಿಸುವ ಸಲುವಾಗಿ ಮತ್ತು ದೇಶವನ್ನು ಸಂರಕ್ಷಿಸುವಲ್ಲಿ ನೌಕಾಪಡೆಯ ಪಾತ್ರವನ್ನು ಸಾರುವ ನಿಟ್ಟಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗುತ್ತದೆ. ವರ್ಷ 46ನೇ ನೌಕಾಪಡೆ ದಿನವನ್ನು ಆಚರಿಸಲಾಗುತ್ತಿದೆ. ನೌಕಾ ದಿನಾಚರಣೆ ಸಮಾರಂಭವು ಭಾರತದ ತಾಂತ್ರಿಕ ಪ್ರಗತಿಗೆ ಕನ್ನಡಿಯಾಗಿರುವುದು ಮಾತ್ರವಲ್ಲದೇ ಭಾರತದ ಸಾಗರ ಸಾಧನೆಗಳನ್ನು ಬಿಂಬಿಸುವ ದಿನವೂ ಇದಾಗಿದೆ.

ಭಾರತೀಯ ನೌಕಾಪಡೆಯು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯುತ್ತಮ ನೌಕಾಪಡೆಗಳಲ್ಲೊಂದಾಗಿದ್ದು, ಹಿಂದೂ ಮಹಾಸಾಗರದಲ್ಲಿ ತೀರಾ ಅಪಾಯಕಾತಿ ಎನಿಸಿದೆ. ಇದು ದೇಶದ ಸಾಗರ ಗಡಿಗಳನ್ನು ಕಾವಲು ಕಾಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಃಆಗೂ ವಿದೇಶಿ ಬಂದರುಗಲ ಕರೆ, ಜಂಟಿ ಕಾರ್ಯಾಚರಣೆ, ಮಾನವೀಯ ಮಿಷನ್ ಹಾಗೂ ವಿಕೋಪ ಪರಿಹಾರದ ಮೂಲಕ ಅಂತರರಾಷ್ಟ್ರೀಯ ಸಂಬಂಧವನ್ನು ಬಲಗೊಳಿಸುವ ಉದ್ದೇಶ ಹೊಂದಿದೆ.

ಹಿನ್ನೆಲೆ

ನೌಕಾಪಡೆ ದಿನಾಚರಣೆಯನ್ನು ಆಪರೇಷನ್ ಟ್ರೈಡೆಂಟ್ ವಿಜಯ ದಿನವಾಗಿ ಆಚರಿಸಲಾಗುತ್ತದೆ. 1971 ಡಿಸೆಂಬರ್ 4ರಂದು ಪಡೆದ ವಿಜಯವನ್ನು ಸಂಭ್ರಮಿಸುವುದು ಇದರ ಉದ್ದೇಶ. 1971 ಭಾರತ- ಪಾಕಿಸ್ತಾನ ಯುದ್ಧದಲ್ಲಿ, ಭಾರತೀಯ ನೌಕಾಪಡೆಯು ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದು ಪಾಕಿಸ್ತಾನದ ನೌಕಾಪಡೆಯ ಭದ್ರ ನೆಲೆಯಾಗಿತ್ತು. ದಾಳಿಯಲ್ಲಿ ಭಾರತದ ನೌಕಾಪಡೆಯು ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿದ್ದವು. ಇದರಲ್ಲಿ ಪಿಎನ್ಎಸ್ ಘಜ್ನಿ ಮತ್ತು ಕರಾಚಿ ಬಂದರಿನ ತೈಲ ಕ್ಷೇತ್ರ ಸೇರಿತ್ತು. ಕಾರ್ಯಾಚರಣೆಯಲ್ಲಿ, ಭಾರತೀಯ ನೌಕಾಪಡೆಯ ಮೂರು ಕ್ಷಿಪಣಿ ನೌಕೆಗಳು ಅಂದರೆ ಐಎನ್ಎಸ್ ನಿರ್ಗತ್, ಐಎನ್ಎಸ್ ನಿಪಾತ್ ಹಾಗೂ ಐಎನ್ಎಸ್ ವೀರ್ ಪ್ರಮುಖ ಪಾತ್ರ ವಹಿಸಿದ್ದವು. ಆಪರೇಷನ್ ಟ್ರೈಡೆಂಟ್. ಮೊಟ್ಟಮೊದಲ ಬಾರಿಗೆ ಹಡಗು ನಿರೋಧಕ ಕ್ಷಿಪಣಿಗಲ ಮೂಲಕ ಅರಬ್ಬಿಸಮುದ್ರದಲ್ಲಿ ದಾಳಿ ನಡೆಸಿತ್ತು.

Comment