IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

5ನೇ ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ ಉದ್ಘಾಟನೆ

5ನೇ ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿಯವರು 5ನೇ ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನವನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು. ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನವು ಇಡೀ ವಿಶ್ವದಲ್ಲೇ ಬೃಹತ್ ಸಮ್ಮೇಳನವಾಗಿದ್ದು, ಮೊದಲ ಬಾರಿಗೆ ಇದನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ.

ಎರಡು ದಿನಗಳ ಸಮ್ಮೇಳನದ ತಿರುಳು, 'ಸೈಬರ್ ಫಾರ್ ಆಲ್: ಎ ಸೆಕ್ಯೂರ್ ಅಂಡ್ ಇನ್‍ಕ್ಲೂಸಿವ್ ಸೈಬರ್ ಸ್ಪೇಸ್ ಫಾರ್ ಸಸ್ಟೈನಬಲ್ ಡೆವಲಪ್‍ಮೆಂಟ್' ಎಂದಾಗಿದೆ.

ಪ್ರಮುಖ ಅಂಶಗಳು

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾಣ ಸಚಿವಾಲಯದ ರಾಷ್ಟ್ರೀಯ ಇ- ಗವರ್ನೆನ್ಸ್ ವಿಭಾಗ ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ-2017ನ್ನು ಭಾರತ ಸರ್ಕಾರದ ಪರವಾಗಿ ಆಯೋಜಿಸಿದೆ. 124 ದೇಶಗಳ ಪ್ರತಿನಿಧಿಗಳು, 31 ದೇಶಗಳ 31 ಸಚಿವ ಮಟ್ಟದ ನಿಯೋಗಗಳು ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನದಲ್ಲಿ ಪಾಲ್ಗೊಂಡಿವೆ.

ಇದರಲ್ಲಿ ಸುಮಾರು 2000 ಮಂದಿ ಪ್ರತಿನಿಧೀಗಳು 100ಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸುವ ನಿರೀಕ್ಷೆ ಇತ್ತು. ನಿರೀಕ್ಷೆಗೂ ಮೀರಿ ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನಕ್ಕೆ ಪ್ರತಿನಿಧಿಗಳು ಆಗಮಿಸಿದ್ದಾರೆ.

ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ-2017ರ ಮುಖ್ಯ ಉದ್ದೇಶವೆಂದರೆ, ಎಲ್ಲರನ್ನೂ ಪಾಲ್ಗೊಂಡ ಮತ್ತು ಮಾನವ ಹಕ್ಕುಗಳನ್ನು ಜಾಗತಿಕ ಸೈಬರ್ ನೀತಿಯಲ್ಲಿ ಅಳವಡಿಸಿಕೊಳ್ಳುವಂತೆ ಉತ್ತೇಜಿಸುವುದು, ಮುಕ್ತ ಹಾಗೂ ಎಲ್ಲರಿಗೂ ಸಮಾನ ಅವಕಾಶದ ಸೈಬರ್ ಸ್ಥಳಾವಕಾಶವನ್ನು ಉಳಿಸಿಕೊಂಡು ಹೋಗುವುದು, ಸಾಮಥ್ರ್ಯ ವೃದ್ಧಿ ಯೋಜನೆಗಳಿಗಾಗಿ ರಾಜಕೀಯ ಬದ್ಧತೆಯನ್ನು ಸೃಷ್ಟಿಸುವುದು ಹಾಗೂ ಡಿಜಿಟಲ್ ವಿಭಜನೆ ಹಾಗೂ ದೇಶಕ್ಕೆ ನೆರವಾಗುವಂತೆ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ಸಮತೋಲಿತ ರೀತಿಯಲ್ಲಿ ಭದ್ರತಾ ಪರಿಹಾರಗಳನ್ನು ಒದಗಿಸುವುದು ಹಾಗೂ ತಾಂತ್ರಿಕ ಸಮುದಾಯ ಮತ್ತು ಖಾಸಗಿ ವಲಯದ ಮಹತ್ವವನ್ನು ಉತ್ತೇಜಿಸುವುದು.

ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ (ಜಿಸಿಸಿಎಸ್)

ಜಾಗತಿಕ ಸೈಬರ್‍ಸ್ಪೇಸ್ ಸಮ್ಮೇಳನ (ಜಿಸಿಸಿಎಸ್)ವು ಪ್ರತಿಷ್ಠಿತ ಜಾಗತಿಕ ಸಮಾರಂಭವಾಗಿದ್ದು, ಅಂತರರಾಷ್ಟ್ರೀಯ ಮುಖಂಡರು, ನೀತಿ ನಿರೂಪಕರು, ಕೈಗಾರಿಕಾ ತಜ್ಞರು, ಚಿಂತಕರು, ಸೈಬರ್ ತಜ್ಞರು ಇದರಲ್ಲಿ ಭಾಗವಹಿಸಿ ಪ್ರಮುಖ ವಿಷಯಗಳು ಮತ್ತು ಸೈಬರ್ ಕ್ಷೇತ್ರದ ಸವಾಲುಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುವರು.

ಇದು ಅಂತರರಾಷ್ಟ್ರೀಯವಾಗಿ ಒಪ್ಪಿಕೊಂಡ ನಿಯಮಾವಳಿಗಳನ್ನು ಸ್ಥಾಪಿಸುವ ಸಲುವಾಗಿ ಮತ್ತು ಹೆಚ್ಚು ನಿರ್ದೇಶಿತ ಸಂವಾದವನ್ನು ಸರ್ಕಾರ, ನಾಗರಿಕರು ಹಾಗೂ ಉದ್ಯಮ ಹೀಗೆ ಎಲ್ಲ ಹಕ್ಕುದಾರರಲ್ಲಿ ಏರ್ಪಡಿಸುವುದು ಇದರ ಉದ್ದೇಶ.

Comment