Universal School Of Administration Integrated Degree college Admission Open for more details contact: 9686664985

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ ಜಾರಿ

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ ಜಾರಿ

 

ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಸಂಬಂಧ 2016ರ ಮಾರ್ಚ್‍ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಈ ಕಾಯ್ದೆಯು ಹಿಂದೆ ಜಾರಿಯಲ್ಲಿದ್ದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-1986 ಕಾಯ್ದೆಯ ಸ್ಥಾನದಲ್ಲಿ ಜಾರಿಗೆ ಬಂದಿದೆ. ಇದು ದೇಶದಲ್ಲಿ ವಹಿವಾಟು ನಡೆಸಲು ಸುಗಮವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ವಿಸ್ತøತಗೊಳಿಸುವಲ್ಲಿ ಇದು ಕೊಡುಗೆ ನೀಡಲಿದೆ. ಜತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಹಾಗೂ ಸೇವೆಗಳು ಲಭ್ಯವಾಗುವಂತೆ ಮಾಡುವಲ್ಲಿ ಇದು ಮಹತ್ವದ್ದಾಗಲಿದೆ.

ಪ್ರಮುಖ ಅಂಶಗಳು

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್: ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಅನ್ನು ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ ಆಗಿ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ. ಇದು ವಸ್ತುಗಳು ಹಾಗೂ ಪ್ರಕ್ರಿಯೆಗಳಿಗೆ ಗುಣಮಟ್ಟ ನಿಗದಿ, ಸೂಕ್ತ ಮಾರ್ಕಿಂಗ್ ಹಾಗೂ ಪ್ರಮಾಣಪತ್ರವನ್ನು ನಿಡಲಿದೆ. ಇದು ಬಿಐಎಸ್‍ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಅಧಿಸೂಚಿತ ಸರಕುಗಳಿಗೆ ಪ್ರಮಾಣಪತ್ರ ಹೊಂದುವುದನ್ನು ಇದು ಕಡ್ಡಾಯಪಡಿಸಲಿದೆ. ಜತೆಗೆ ಗುಣಮಟ್ಟದ ಮುದ್ರೆಯನ್ನು ಹೊಂದಿರುವುದು ಕಡ್ಡಾಯ.

ಅಂಶಗಳು: ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕಾಯ್ದೆ- 2016, ಯಾವುದೇ ವರ್ಗದ ಕೈಗಾರಿಕೆ, ಪ್ರಕ್ರಿಯೆ, ವ್ಯವಸ್ಥೆ ಅಥವಾ ಸೇವೆಗಳನ್ನು ಬಳಸುವ ಯಾವುದೇ ಸರಕು ಅಥವಾ ವಸ್ತುಗಳಿಗೆ ಕಡ್ಡಾಯ ಪ್ರಮಾಣಪಪತ್ರ ಪಡೆಯುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ. ಇದು ಹಾಲ್‍ಮಾರ್ಕ್‍ಗಳನ್ನು ಅಮೂಲ್ಯ ಲೋಹಗಳ ವಸ್ತುಗಳಿಗೆ ಕಡ್ಡಾಯಪಡಿಸಲಿದೆ.

ಖಾತ್ರಿಪಡಿಸುವ ಮೌಲ್ಯಮಾಪನ ಯೋಜನೆ: ಹೊಸ ಕಾಯ್ದೆಯು, ಬಹುವಿಧದ ಸರಳೀಕೃತ ದೃಢೀಕರಣ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಲ್ಲಿ ಗುಣಮಟ್ಟದ ಸ್ವಯಂಘೋಷಣೆ ಸೇರಿದೆ. ಇದರ ಅನ್ವಯ ಉತ್ಪಾದಕರು ಸರಳವಾಗಿ ಗುಣಮಟ್ಟಕ್ಕೆ ಬದ್ಧರಾಗಿರುವಂತೆ ನೋಡಿಕೊಳ್ಳಲು ಅವಕಾಶವಾಗಲಿದೆ.

ಇತರ ಅಧಿಕಾರ: ಕಾಯ್ದೆಗೆ ಅನುಗುಣವಾಗಿ ಕೇಂದ್ರ ಸರ್ಕಾರ, ಉತ್ಪನ್ನ ಅಥವಾ ಸೇವೆಗಳ ಗುಣಮಟ್ಟ ದೃಢೀಕರಣಕ್ಕೆ ಯಾವುದೇ ಪ್ರಾಧಿಕಾರ, ಏಜೆನ್ಸಿಯನ್ನು ಹೊಸದಾಗಿ, ಬಿಐಎಸ್‍ಗೆ ಹೆಚ್ಚುವರಿಯಾಗಿ ಆರಂಭಿಸಬಹುದಾಗಿದೆ.

ವಸ್ತು ಹಿಂದಕ್ಕೆ ಪಡೆಯುವುದು

ನೂತನ ಕಾಯ್ದೆಯ ಅನ್ವಯ, ಬಿಐಎಸ್ ಯಾವುದೇ ಸರಕು ಅಥವಾ ವಸ್ತುಗಳನ್ನು ಮಾರಾಟಕ್ಕೆ ಸರಬರಾಜು ಆಗಿದ್ದರೂ, ಅಗತ್ಯ ಗುಣಮಟ್ಟವನ್ನು ಹೊಂದಿಲ್ಲದಿದ್ದರೆ ವಾಪಾಸು ಪಡೆಯುವಂತೆ ನಿರ್ದೆಶಿಸುವ ಅಧಿಕಾರ ಹೊಂದಿರುತ್ತದೆ. ಇದಲ್ಲದೇ ಉತ್ಪನ್ನದ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟದ ಮಾರ್ಕ್ ಹೊಂದಿರುವ ಯಾವುದೇ ಉತ್ಪನ್ನಗಳನ್ನು, ನಿರ್ದಿಷ್ಟ ಗುಣಮಟ್ಟ ಹೊಂದಿರದಿದ್ದರೆ ದುರಸ್ತಿ ಮಾಡಲು ಅಥವಾ ವಾಪಾಸು ಕರೆಸಿಕೊಳ್ಳಲು ಅಧಿಕಾರ ಇರುತ್ತದೆ.

ಅಮೂಲ್ಯ ಲೋಹಗಳ ಪ್ರಮಾಣಪತ್ರ: ಎಲ್ಲ ದೃಢೀಕೃತ ಅಮೂಲ್ಯ ಲೋಹಗಳಿಗೆ ಹಾಲ್‍ಮಾರ್ಕ್ ಕಡ್ಡಾಯಪಡಿಸುವುದೂ ಇದರಲ್ಲಿ ಸೇರಿದೆ. ಬೆಳ್ಳಿ, ಚಿನ್ನ, ಪ್ಲಾಟಿನಂ ಹಾಗೂ ಪಲ್ಲಾಡಿಯಂ ಅಥವಾ ಮಿಶ್ರಲೋಹಗಳ ಆಭರಣಗಳು ಅಥವಾ ವಸ್ತುಗಳಿಗೆ ಹಾಲ್‍ಮಾರ್ಕ್ ಮಾಡುವುದು ಕಡ್ಡಾಯವಾಗಲಿದೆ.

ಕಡ್ಡಾಯ ಪ್ರಮಾಣಪತ್ರ

ಇದರ ಅನ್ವಯ ಕೇಂದ್ರ ಸರ್ಕಾರ ಕೆಲ ಸರಕು, ವಸ್ತುಗಳು ಅಥವಾ ಸೇವೆಗಳನ್ನು ಅಧಿಸೂಚಿತ ಸರಕುಗಳು ಎಂದು ಘೋಷಿಸಲು ಅಧಿಕಾರ ಹೊಂದಿರುತ್ತದೆ. ಇಂಥ ವಸ್ತುಗಳು ಕಡ್ಡಾಯವಾಗಿ ಗುಣಮಟ್ಟದ ಮುದ್ರೆ ಹೊಂದಿರಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ.

ಕಂಪನಿಗಳಿಂದ ಅಪರಾಧ: ಈ ಕಾಯ್ದೆಯ ಅನ್ವಯ ಅಪರಾಧ ಎಸಗುವ ಕಂಪನಿಗಳ, ಜವಾಬ್ದಾರಿಯುತ ವ್ಯಕ್ತಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು. ಇಂಥ ಅಧಿಕಾರಿಗಳ ಗಮನಕ್ಕೆ ಬಂದು ಅಥವಾ ಬಾರದೇ, ಒಪ್ಪಿಗೆ ಪಡೆದು ಅಥವಾ ಪಡೆಯದೇ ಇಂಥ ಅಪರಾಧ ನಡೆದಿದ್ದರೂ ಅವರು ಹೊಣೆಗಾರರಾಗುತ್ತಾರೆ.

ಮೇಲ್ಮನವಿ: ದೃಢೀಕೃಣದ ಪ್ರಮಾಣಪತ್ರವನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ, ಎಲ್ಲ ಅಪರಾಧಗಳನ್ನು ಬಿಐಎಸ್ ಮಹಾನಿರ್ದೇಶಕರಿಗೆ ವರದಿ ಮಾಡಬೇಕಾಗುತ್ತದೆ. ಬಿಐಎಸ್ ಡಿಜಿಯ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.

Comment